ನಮ್ಮ ಬಗ್ಗೆ
Know Your Fish (KYF),ನಿಮ್ಮ ಮೀನುಗ ಬಗೆಗೆ ತಿಳಿದುಕೊಳ್ಳಿ ಎಂಬುದು, ಕಡಲ ಸ್ನೇಹಿ ಜೀವನಶೈಲಿಗೆ ಒಂದು ಸ್ವಯಂಪ್ರೇರಿತ ಪ್ರಾರಂಭ. ನಾವು ಸ್ವಯಂಪ್ರೇರಣೆಯ ಉತ್ತೇಜನಕ್ಕಾಗಿ ಕೆಲಸ ಮಾಡುತ್ತೇವೆ. ನಾವು ಗ್ರಾಹಕರು ಸಮುದ್ರ ಉತ್ಪನ್ನಗಳನ್ನು ಜವಾಬ್ಧಾರಯುತರಾಗಿ ಬಳಸಲು/ತಿನ್ನಲು ಪ್ರೋತ್ಸಾಹಿಸುತ್ತೇವೆ. ಸಮುದ್ರ ಮತ್ತು ಅಲ್ಲಿ ವಾಸಿಸುವ ಜೀವಿಗಳ ಕುರಿತು ದಶಕಗಳಿಂದ ಆದ ಅಧ್ಯಯನದ ಆಧಾರದಲ್ಲಿ ಯಾವ ಜೀವಿಗಳನ್ನು,ಯಾವಾಗ ತಿನ್ನಬಹುದು ಮತ್ತು ತಿನ್ನಕೂಡದು ಎಂಬ ಮಾಹಿತಿಗಳನ್ನು ಕೊಡುತ್ತೇವೆ.
ಅತಿಯಾದ ಮೀನುಗಾರಿಕೆಯ ಸಮಸ್ಯೆಗಳನ್ನು ನಾವು ವಿವಿಧ ರೀತಿಗಳಿಂದ ಎದುರಿಸಬೇಕಾಗುತ್ತದೆ. ಇಂಥಾ ಸಾಮೂಹಿಕ ಪ್ರಯತ್ನಗಳಲ್ಲಿ , KYF ನಂಥಾ ಮುಂದಾಳತ್ವ ವಿಶೇಷ ಸ್ಥಾನ ಪಡೆಯುತ್ತದೆ. ಇಂಥಾ ಮುಂದಾಳತ್ವವು, ಸಮುದ್ರದ ಪಾರಿಸಾರಿಕ ವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ. ಮನುಷ್ಯನೇ ತನ್ನ ಬೇಡಿಕೆಯನ್ನು , ವೈಜ್ಞಾನಿಕವಾಗಿ ಅರಿತಾಗ ಸಮುದ್ರದ ಜೀವಿಗಳ ಸಮತೋಲನವನ್ನು ಕಾಪಾಡುವಲ್ಲಿ ಭಾರಿ ಮಹತ್ವ ಪಡೆದುಕೊಳ್ಳುತ್ತದೆ. ಆದರೂ, KYF ನ ಈ ತೊಡಗುವಿಕೆ, ಸರಕಾರದ ಮೀನುಗಾರಿಕಾ ನಿಯಮ, ಸರಕಾರದ ನಿಯಂತ್ರಣ, ಮೀನುಗಾರಿಕಾ ತಾಂತ್ರಿಕತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದಲಿಯಲ್ಲ.
ಸಮುದ್ರವನ್ನು, ಸಮುದ್ರದ ಜೀವವೈವಿಧ್ಯವನ್ನು, ಸಮುದ್ರದಿಂದ ಲಭಿಸುವ ಆಹಾರವನ್ನು ಮೆಚ್ಚುವ ಸಂಶೋಧಕರನ್ನು ಒಡಗೂಡಿರುವ ತಂಡ ನಮ್ಮದು. ನಾವು ಸಮುದ್ರವನ್ನು, ಅದೊರೊಳಗಿನ ಆಹಾರವನ್ನು ಪ್ರೀತಿಸುವ ಜನಕ್ಕೆ ಸಮುದ್ರದ ಜಲಚರಗಳಿಗೆ ಅಪಾರ ಹಾನಿಯಾಗದಂತೆ ,ಸೂಕ್ಷ್ಮತೆಯಿಂದ ತಿನ್ನುವಲ್ಲಿ ಸಹಾಯ ಮಾಡುತ್ತೇವೆ.
ನಿಮ್ಮ ಮೀನುಗಳ ಬಗೆಗೆ ತಿಳಿದುಕೊಳ್ಳಿ {Know Your Fish (KYF)}, ಶಿಫಾರಸ್ಸುಗಳು ನಾವು ನಂಬಿರುವ ಕೆಲವು ಮೌಲ್ಯದ ಆಧಾರದಿಂದ ಹೊರಬಂದಿವೆ.
೧. ಮನುಷ್ಯೆತರ ಜೀವಿಗಳ ರಕ್ಷಣೆ ಸಾಮಾಜಿಕ ಬದ್ದತೆಯಾಗಬೇಕು .
೨. ಪ್ರತಿಯೊಬ್ಬರೂ ಅವರರವರ ಮಿತಿಯಲ್ಲಿ ಸಂರಕ್ಷಣೆ ಮಾಡಿದರೆ ಇದು ಸಾಧ್ಯವಾಗುತ್ತದೆ.
೩. ಜನರು ಸಂರಕ್ಷಣೆಗೆ ನೈತಿಕವಾಗಿ ಬೆಂಬಲ ಸೂಚಿಸುತ್ತಾರೋ, ಮತ್ತು ಅದಕ್ಕೆ ವಿಜ್ಞಾನವನ್ನು ಉಪಕರಣವಾಗಿ ಬಳಸುತ್ತಾರೋ, ಅವರಿಗೆ ಮಾಹಿತಿಗಳನ್ನು ಕೈಗೆಟಕುವ ರೀತಿಯಲ್ಲಿ ತಲುಪಿಸುವುದು ನಮ್ಮ ಬದ್ಧತೆಯಾಗಿದೆ.
-
ಬೌದ್ಧಿಕ ಮತ್ತು ಕಾರ್ಯವಿಧಾನದಲ್ಲಿ ಸ್ವಾತಂತ್ಯವನ್ನು ಉಳಿಸಿಕೊಳ್ಳುವುದು
-
ನಾವು ನಮ್ಮ ಮೂಲ ತತ್ವ ಮತ್ತು ನೀತಿಗಳನ್ನು ಯಾವುದೇಕಾರಣಕ್ಕೂ, ಯಾರ ಆಮಿಷಕ್ಕೂ ಬದಲಾಯಿಸಿಕೊಳ್ಳುವುದಿಲ್ಲ.
-
ಟೀಕೆಗಳನ್ನು ಸ್ವೀಕರಿಸುವುದು - ತಂಡವಾಗಿ ನಾವು ಎಲ್ಲಾ ಟೀಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಮುಕ್ತಮನಸ್ಸಿನಿಂದ ತೆಗೆದುಕೊಳ್ಳುತ್ತೇವೆ. ಎಲ್ಲಾ ಪ್ರಶ್ನೆಗಳಿಗೂ ನಾವು , ನಮ್ಮ ಅರಿವಿಗಾನುಸಾರವಾಗಿ ಉತ್ತರಿಸುತ್ತೇವೆ.
-
ಸಂವಹನದಲ್ಲಿ ಪಾರದರ್ಶಕತೆ -
-
ನಮ್ಮೆಲ್ಲಾ ಡೇಟಾ/ಮಾಹಿತಿಗಳು , ನಾವು ಯಾವ ತರ್ಕದಿಂದ ಶಿಫಾರಸ್ಸುಗಳನ್ನು ಮಾಡಿದ್ದೇವೆ ಎಂಬುದು ಸಾರ್ವಜನಿಕ ವೇದಿಕೆ/ ಡೊಮೇನ್ ನಲ್ಲಿ ಸದಾ ಲಭ್ಯವಿರುತ್ತದೆ
-
ಸಂವಹನದಲ್ಲಿ ಪ್ರಾಮಾಣಿಕತೆ - ನಾವು ನಮಗೆ ತಿಳಿದಮಟ್ಟಿಗೆ ಮೀನು ಮತ್ತು ಮೀನುಗಾರಿಕೆಯ ಕುರಿತು ಟಿಪ್ಪಣಿಗಳನ್ನು ಕೊಡುತ್ತೇವೆ. ನಾವು ಸಮುದ್ರದ ಸಂರಕ್ಷಣೆಯ ಕುರಿತಾದ ಮಾಹಿತಿಗಳನ್ನು ಉತ್ಪ್ರೇಕ್ಷೆಯಾಗಲೀ , ಅವಗಣನೆಯಾಗಲೀ ಮಾಡುವುದಿಲ್ಲ.
-
ನಾವು ನಮ್ಮ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ, ಸೋಲುಗಳಿಂದ ಇನ್ನಷ್ಟು ಕಲಿತು ಪಕ್ವವಾಗುವಲ್ಲಿ ಉತ್ಸುಕರಾಗಿದ್ದೇವೆ.
ನಿಮ್ಮ ಮೀನುಗಳ ಬಗೆಗೆ ತಿಳಿದುಕೊಳ್ಳಿ {Know Your Fish (KYF) ತಂಡದ ಬಗೆಗೆ ಹೇಳುವುದು ತುಸು ಕಷ್ಟದ ಕೆಲಸ. ನಮ್ಮ ಸಹ-ಸಂಸ್ಥಾಪಕರು ಮೀನಿನುಗಳ ಕುರಿತು ತಿಳಿದಿರುವ ಅನೇಕರ ಸಹಾಯವನ್ನು ಪಡೆದಿರುತ್ತಾರೆ. ನಾವಿಲ್ಲಿ ಕೆಲವು ವ್ಯಕ್ತಿ ಮತ್ತು ಸಂಸ್ಥೆಗಳ ( ಶ್ರೇಣೀಕೃತವಲ್ಲ) ಹೆಸರುಗಳನ್ನೂ ಪಟ್ಟಿ ಮಾಡಿರುತ್ತೇವೆ. ಇವರೆಲ್ಲರೂ ನಮ್ಮ ಈ ಪ್ರಯತ್ನಕ್ಕೆ ಕಾರಣೀಭೂತರು.