top of page

ಜವಾಬ್ಧಾರಿಯುತವಾಗಿ ಏಕೆ ತಿನ್ನಬೇಕು

ಸಮುದ್ರದ ಆಹಾರದ ಗ್ರಾಹಕರಾಗಿ, ನಮಗೆ ಅಲ್ಲಿಯ ಮೀನು ಬಹಳ ಇಷ್ಟವಾಗುತ್ತದೆ ಮತ್ತು ಮುಂದೆಯೂ, ದೀರ್ಘಕಾಲ ಅದನ್ನು ತಿನ್ನುವ ಆಸೆಯೂ ವ್ಯಕ್ತವಾಗುತ್ತದೆ. ಕಳೆದ ಎರಡು ದಶಕಗಳಿಂದ ನಮ್ಮ ಸಮುದ್ರದಲ್ಲಿ  ನಮಗೆ  ಇಷ್ಟವಾಗುವ ಮೀನು  ಲಭಿಸುತ್ತಿಲ್ಲ . ನಾವು  ಹಿಡಿದು ತಿನ್ನುವ ಮೀನಿನ ಪ್ರಮಾಣ, ಸಮುದ್ರದಲ್ಲಿ ಉತ್ಪಾದನೆಯಾಗುವ ಮೀನಿನ ಪ್ರಮಾಣಕ್ಕಿಂತ ಬಹಳವೇ ಅಧಿಕವಾಗಿದೆ. ಇದನ್ನೇ ನಾವು ಅತಿಯಾದ ಮೀನುಗಾರಿಕೆ ಎನ್ನುವುದು.

ನಮ್ಮ ಮೀನಿನ ಅತಿಯಾದ ಬೇಡಿಕೆಯೇ , ಅತಿಯಾದ ಮೀನುಗಾರಿಕೆಗೆ ಕಾರಣ.

 

ಭಾರತದಲ್ಲಿ ಶ್ರಾವಣ ಮಾಸ ಅಥವಾ ಗಣಪತಿ ಹಬ್ಬದ ಸಮಯವನ್ನೇ ಗಮನಿಸಿ (ಆಗಸ್ಟ್ - ಸೆಪ್ಟೆಂಬರ ). ಈ ತಿಂಗಳುಗಳು ಪವಿತ್ರ ಎಂಬ ಭಾವನೆ ಇದ್ದು  ಅನೇಕರು ಈ ಸಮಯದಲ್ಲಿ ಮೀನನ್ನು ತಿನ್ನಲು ಇಚ್ಛಿಸುವುದಿಲ್ಲ. ಹಾಗಾಗಿ ಮೀನುಗಾರರೂ  ಕೂಡ ಈ ಸಮಯದಲ್ಲಿ ಹೆಚ್ಚಿಗೆ ಸಮುದ್ರಕ್ಕೆ ಹೋಗುವುದಿಲ್ಲ.

 

ಅದೇ ರೀತಿ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಯ ಸಮಯದಲ್ಲಿ ಮೀನುಗಳಿಗೆ ಅತಿಯಾದ ಬೇಡಿಕೆ ಇರುತ್ತದೆ. ಇಂಥಾ ಸಮಯದಲ್ಲಿ ಮೀನುಗಾರರು ಕೂಡಾ ಬೇಡಿಕೆಗೆ ಅನುಸಾರವಾಗಿ ಹೆಚ್ಚಿಗೆ ಮೀನುಗಳನ್ನು ಹಿಡಿಯುತ್ತಾರೆ. ಈ ಎರಡೂ  ಉದಾಹರಣೆಗಳು ನಮ್ಮ ಬೇಡಿಕೆಗಳು ಹೇಗೆ ಮೀನಿನ ಬೇಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತದೆ.

KYF_WER_Graph.png
Overfishing_WebSize.jpg

ನಾವು ಮೀನನ್ನು ತಿನ್ನುವುದನ್ನು ಬಿಡದೆಯೂ, ಯಾವ ಮೀನನ್ನು ಯಾವಾಗ ತಿನ್ನಬಾರದು ಮತ್ತು ತಿನ್ನಬಹುದು ಎಂದು ಅರಿತರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನಮಗೆ ಇಷ್ಟವಾದ ಮೀನುಗಳ ಸಂತಾನೋತ್ಪತ್ತಿ ಸಮಯದಲ್ಲಿ, ಅವುಗಳನ್ನು ತಿನ್ನುವುದನ್ನು ಬಿಡೋಣ.  ಹೀಗೆ ಮಾಡುವುದರಿಂದ ನಮಗೆ ಇಷ್ಟವಾಗುವ ಮೀನುಗಳು ಬೇರೆ ಸಮಯದಲ್ಲಿ ಯಥೇಚ್ಛವಾಗಿ ಲಭಿಸುವುದು.

ಈ ಕಾರಣಕ್ಕಾಗಿಯೇ ನಾವು ಜವಾಬ್ಧಾರಿಯಿಂದ/ ಜವಾಬ್ದಾರಿ ಅರಿತು ಸಮುದ್ರ ಮೀನುಗಳನ್ನು ತಿನ್ನಬೇಕು.

bottom of page